
ಬೆಂಗಳೂರು: ಕಚೇರಿಯಲ್ಲಿರಬೇಕಾದ ಬಿಡಿಎ ಕಡತಗಳನ್ನು ಕದ್ದು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಮೂವರು ಮಧ್ಯವರ್ತಿಗಳನ್ನು ಬಿಡಿಎ ಪೊಲೀಸರು ಮಧ್ಯ ವರ್ತಿಗಳನ್ನು ಬಿಡಿಎ ಪೊಲೀಸರು ಬಂಧಿಸಿ ಸೈಟ್‌ವೊಂದರ ಕಡತವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಧ್ಯವರ್ತಿಗಳಾದ ಲಕ್ಷ್ಮಣ, ರವಿ ಹಾಗೂ ಶ್ರೀನಿವಾಸ್ ಬಂಧಿತರು. ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬನಶಂಕರಿ 2ನೇ ಹಂತ ಹೊಸಕೆರೆ ಹಳ್ಳಿಯಲ್ಲಿರುವ ಸೈಟ್ ಸಂಖ್ಯೆ 202 ಬಿ.ಸಿ ಭಾರತಿ ಎಂಬುವರಿಗೆ ಸೇರಿದ್ದಾಗಿದ್ದು ಸೈಟ್‌ನ ಕಡತವನ್ನು ಬಿಡಿಎ ಸೈಟ್ ಮಂಜೂರು ವಿಭಾಗದಿಂದ ಬುಧವಾರ ಸಂಜೆ 4.30ರ ಸುಮಾರಿಗೆ ಆರೋಪಿಗಳು ಕದ್ದು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈ ಬಗ್ಗೆ ಸಿಕ್ಕ ಮಾಹಿತಿ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆಗಾಗಿ ನೀಡಲಾಗಿದೆ ಎಂದು ಬಿಡಿಎ ಎಸ್ಪಿ ಜಿತೇಂದ್ರನಾಥ್ ಅವರು ತಿಳಿಸಿದ್ದಾರೆ.
Advertisement